ಕಾರ್ಪೋರೆಟ್ ಕಲ್ಚರ್ ಒಂದು ವಿಡಂಭನೆ
ಒಬ್ಬ ವಿಜ್ಞಾನಿಯಿದ್ದ ಮತ್ತು ಯಾವುದೊ ಒಂದು ಪ್ರಯೋಗ ನಡೆಸಿದ್ದ. ಅದಕ್ಕಾಗಿ ಆಯ್ದ ಎಂಟು ಕೋತಿಗಳನ್ನು ಒಂದು ರೂಮಿನಲ್ಲಿರಿಸಿದ. ರೂಮಿನ ಮೇಲ್ಚಾವಣಿಯಲ್ಲಿ ಕಣ್ಣಿಗೆ ಕಾಣುವಂತೆ ಒಂದು ಬಾಳೆಯ ಗೊನೆ ನೇತು ಹಾಕಲಾಗಿತ್ತು ಹಾಗು ಅದು ಕೋತಿಗಳಿಗೆ ಸಿಗುವಂತಿರಲಿಲ್ಲ. ಅದರ ಪಕ್ಕದಲ್ಲಿಯೆ ಒಂದು ಏಣಿ ಹಾಕಲಾಗಿತ್ತು ಏಣಿ ಹತ್ತಿ ಹೋಗಿ ಬಾಳೆಹಣ್ಣು ಕೀಳಲು ಕೋತಿಗಳಿಗೆ ಅನುಕೂಲ ಮಾಡಲಾಗಿತ್ತು. ಎಲ್ಲವು ಏಣಿ ಹತ್ತಿ ಹೋಗಿ ಹಣ್ಣು ತಿನ್ನುತ್ತಿದ್ದವು
ಪ್ರಯೋಗದ ಮುಂದಿನ ಬಾಗ: ಈಗ ಅವನು ರೂಮಿನಲ್ಲಿ ಮೋಟರಿಗೆ ಹೊಂದಿಸಿದ ನೀರಿನ ಪೈಪ್ ಅಳವಡಿಸಿದ. ಮತ್ತು ಯಾವುದಾದರು ಕೋತಿ ಏಣಿ ಹತ್ತಲು ಹೋದಲ್ಲಿ ಅದರ ಮೇಲೆ ರಬಸವಾಗಿ ಪೈಪಿನಿಂದ ನೀರು ಬಿಡಲಾಗುತ್ತಿತ್ತು, ಅದು ನೋವಿನಿಂದ ಏಣಿ ಹತ್ತದೆ ಕೆಳಗೆ ಬರುತ್ತಿತ್ತು. ಅಷ್ಟೆ ಅಲ್ಲ ಯಾವ ಒಂದು ಕೋತಿ ಏಣಿ ಹತ್ತಲು ಹೋದರು ಎಲ್ಲ ಎಂಟು ಕೋತಿಗಳ ಮೇಲು ನೀರನ್ನು ರಬಸವಾಗಿ ಬಿಡುತ್ತಿದ್ದರು, ಈಗ ಒಂದು ಸಂಕಟ ಮೊದಲೆ ಕೋತಿ ಬುದ್ದಿ, ಮೇಲೆ ಬಾಳೆಹಣ್ಣು ಮರೆತು ಮರೆತು ಯಾವುದಾದರು ಕೋತಿ ಏಣಿ ಹತ್ತಲು ಹೋಗುವುದು ಎಲ್ಲ ಕೋತಿಗಳು ನೋವಿನಿಂದ ಕಿರುಚುವುದು ನಡೆಯುತ್ತಿತ್ತು. ಕಡೆಗೆ ಕೋತಿಗಳು ಒಂದು ಅರ್ಥ ಮಾಡಿಕೊಂಡವು, ತಮ್ಮಲ್ಲಿ ಯಾರು ಏಣಿ ಹತ್ತಿದರು ಎಲ್ಲರಿಗೂ ಹಿಂಸೆ ತಪ್ಪಿದ್ದಲ್ಲ. ಈ ವಿಷಯ ಅರ್ಥವಾಗುತ್ತಲೆ ಎಲ್ಲ ಎಚ್ಚರವಾದವು ಯಾವ ಕೋತಿ ಏಣಿ ಹತ್ತಲು ಹೋದರು ಉಳಿದೆಲ್ಲ ಕೋತಿಗಳು ಅದರ ಮೇಲೆ ಬಿದ್ದು ,ಕಚ್ಚಿ ಪರಚಿ ಹಿಂದೆ ಎಳೆದು ಮೇಲೆ ಹತ್ತದಂತೆ ಮಾಡುತ್ತಿದ್ದವು. ಎಲ್ಲ ಕೋತಿಗಳಿಗು ಅರ್ಥವಾಗಿತ್ತು ತಾನು ಮೇಲೆ ಹತ್ತಲು ಹೋದರೆ ಉಳಿದ ಕೋತಿಗಳು ಬಿಡುವುದಿಲ್ಲ.
ಮುಂದಿನ ಬಾಗ: ವಿಜ್ಞಾಯಿಯು ಈಗ ಒಂದು ಕೋತಿಯನ್ನು (A ಅಂದುಕೊಳ್ಳಿ) ಹೊರಗೆ ತೆಗೆದು ಅದರ ಬದಲಿಗೆ ಹೊಸಕೋತಿಯನ್ನು (A1 ಅಂದುಕೊಳ್ಳಿ) ಒಳಗೆ ಬಿಟ್ಟ. ಹೊಸ ಕೋತಿಗೆ ನೀರಿನ ಪೈಪಿನ ಬಗೆಗೆ ತಿಳಿದಿರಲಿಲ್ಲ ಅದು ಏಣಿಯನ್ನು ಹತ್ತಲು ಹೋಯಿತು, ಉಳಿದ ಕೋತಿಗಳು ಅದನ್ನು ಕೆಳಗೆ ಎಳೆದು ಕಚ್ಚಿ ಪರಚಿ ರಂಪಮಾಡಿದವು. ಹೊಸಕೋತಿಗೆ ಅರ್ಥವಾಗದು ತನ್ನನ್ನು ಇವು ಮೇಲೆ ಬಿಡುತ್ತಿಲ್ಲ ಅವುಗಳು ಏಕೆ ಮೇಲೆ ಹೋಗುತ್ತಿಲ್ಲ ಕಡೆಗೆ ಅದು ಮೇಲೆ ಹೋಗುವ ಪ್ರಯತ್ನ ಕೈಬಿಟ್ಟಿತ್ತು ಮತ್ತು ಅರ್ಥ ಮಾಡಿಕೊಂಡಿತ್ತು ಮೇಲೆ ಹೋಗಲು ಏಣಿಯ ಹತ್ತಿರ ಹೋದಲ್ಲಿ ಉಳಿದ ಕೋತಿಗಳು ಬಿಡುವದಿಲ್ಲ.
ಮುಂದಿನ ಬಾಗ: ಈಗ ವಿಜ್ಞಾನಿಯು ಎರಡನೆ ಕೋತಿಯನ್ನು (B ಅಂದುಕೊಳ್ಳಿ) ಹೊರತೆಗೆದು ಹೊಸಕೋತಿಯನ್ನು (B1 ಅಂದುಕೊಳ್ಳಿ) ಬಿಟ್ಟ, ಪುನಃ ಅದೇ ಕತೆ ಆ ಕೋತಿಯನ್ನು ಏಣಿಯ ಹತ್ತಿರ ಹೋಗಲು ಬಿಡಲೆ ಇಲ್ಲ ಉಳಿದ ಕೋತಿಗಳು. ವಿಚಿತ್ರ ಅಂದರೆ ನೀರಿನ ಪೈಪಿನ ವಿಷಯವೆ ಗೊತ್ತಿಲ್ಲದ ಹೊಸಕೋತಿ (A1) ಸಹ ಉಳಿದ ಕೋತಿಗಳ ಜೊತೆ ಸೇರಿ ಹೊಸದಾಗಿ ಬಂದ (B1) ಕೋತಿಯನ್ನು ಏಣಿಯಹತ್ತಿರ ಹೋಗದಂತೆ ತಡೆಯುತ್ತಿತ್ತು, ಕಡೆಯಲ್ಲಿ b1 ಸಹ ಉಳಿದ ಕೋತಿಯಂತೆ ಆಯಿತು.
ಮುಂದಿನ ಬಾಗ : ವಿಜ್ಞಾನಿ ಉಳಿದ ಆರು ಕೋತಿಗಳನ್ನು ಸಹ ಇದೆ ರೀತಿ ಬದಲಾಯಿಸುತ್ತ ಹೋದ ಈಗ ರೂಮಿನಲ್ಲಿ ಎಂಟು ಹೊಸಕೋತಿಗಳಿದ್ದವು, A1,B1.........H1. ಯಾವ ಕೋತಿಗು ಸಹ ನೀರಿನ ಪೈಪಿನಿಂದ ನೀರು ಬಿಡುವ ವಿಷಯವಾಗಲಿ ನೋವಾಗುವ ವಿಷಯವಾಗಲಿ ತಿಳಿದಿರಲಿಲ್ಲ ಆದರು ಸಹ ತಮ್ಮ ಗುಂಪಿನಲ್ಲಿ ಯಾವುದೆ ಕೋತಿ ಏಣಿಯ ಹತ್ತಿರ ಹೋದ ತಕ್ಷಣ ಅದರ ಮೇಲೆ ಆಕ್ರಮಣ ಮಾಡಿ ಮೇಲೆ ಹೋಗದಂತೆ ತಡೆಯುತ್ತಿದ್ದವು.ಮತ್ತು ಪ್ರತಿ ಕೋತಿಗು ತಿಳಿದಿತ್ತ ತಾನು ಮೇಲೆ ಹತ್ತಲು ಹೋದರೆ ಉಳಿದ ಕೋತಿಗಳು ತನ್ನನ್ನು ಬಿಡುವದಿಲ್ಲ.
ಇಲ್ಲಿಗೆ ಕಥೆ ಮುಗಿಯಿತು. ನಮ್ಮ ಕಾರ್ಪೊರೆಟ್ ಆಫೀಸ್ ಗಳಲ್ಲಿ ಆಗಲಿ ಸರ್ಕಾರಿ ಆಫೀಸ್ ಗಳಲ್ಲಿ ಆಗಲಿ ಇದೆ ರೀತಿಯಲ್ಲವೆ ಕೆಲಸ ನಡೆಯುವುದು. ಯಾರಿಗು ತಾವು ಏನು ಮಾಡುತ್ತಿದ್ದೇವೆಂದು ಸರಿಯಾಗಿ ತಿಳಿದಿರುವದಿಲ್ಲ ಮತ್ತು ಏಕೆ ಮತ್ತು ಯಾರಿಗಾಗಿ ಮಾಡುತ್ತಿದ್ದೆವೆಂದು ತಿಳಿದಿರುವದಿಲ್ಲ. ಆದರು ಯಾರೊ ಹೇಳಿದರೆಂದು ಮಾಡುತ್ತಲೆ ಇರುತ್ತೇವೆ. ಅದಕ್ಕೆ ಕಾರಣ ಅಥವ ಪರಿಣಾಮ ಎರಡು ಗೊತ್ತಿಲ್ಲದೆ.
(ಸ್ನೇಹಿತರಿಂದ ಕೇಳಿದ್ದು)

No comments:
Post a Comment
enter your comments please