Saturday, June 14, 2014

ಬದುಕು ಹಾಗು ಗಡಿಯಾರ

ಬದುಕು ಹಾಗು ಗಡಿಯಾರ
==============
ಪ್ರತಿವ್ಯಕ್ತಿಯ ಬದುಕಿನ
ಜೊತೆ ಜೊತೆಗೂ
ಒಂದು ಗೋಡೆ ಗಡಿಯಾರವೂ ಜೊತೆಗಿರುತ್ತದೆ
ಅಪ್ಪ ಇರುವವರೆಗೂ
ಜೊತೆಗಿತ್ತು ಒಂದು 'ಮಾಸ್ಟರ್ ಕ್ಲಾಕ್ '
ಘಂಟೆ ಹೊಡೆಯುತ್ತ ನಡೆಯುತ್ತ ಇತ್ತು
ಬಾನುವಾರ ಮೇಲೆ ಹತ್ತಿ ಕೀ ಕೊಡುವ ಸಂಭ್ರಮ
ಅವರ ನಂತರ ನಿಂತು
ನೊಂದು ಮೂಲೆ ಸೇರಿತು
ನಮ್ಮ ಮನೆಯಲ್ಲು
ಒಂದು ಗೋಡೆ ಗಡಿಯಾರವಿದೆ
ಸ್ಯಾಮೇ ಎಂದು ಹೆಸರಿದೆ
ಕೀ ಕೊಡುವ ಸಂಭ್ರಮವಿಲ್ಲ
ಘಂಟೆ ಹೊಡೆಯದೆ
ಗಂಟೆ ನಿಮಿಶ ತೋರುತ್ತಿದೆ
.......
ಎಂದು ನಿಲ್ಲುವುದೋ ಅರಿಯದಾಗಿದೆ.







1 comment:

  1. ನಮ್ಮ ಚಿಕ್ಕಪ್ಪನ ಮನೆಯಲ್ಲೂ ಇಂತದೇ ಗೋಡೆ ಗಡಿಯಾರವಿತ್ತು.
    ಗಡಿಯಾರದ ನೆಪದಲ್ಲಾದರೂ ಅಗಲಿದ ಚಿಕ್ಕಪ್ಪನನ್ನು ನೆನಪಿಸಿದ ತಾವು ನನಗೆ ಮಾನ್ಯರು.

    ReplyDelete

enter your comments please