Thursday, March 3, 2016
ವಾಸ್ತವಕ್ಕೆ ದೂರ... ಲಕ್ಷಗಳ , ಕೋಟಿಗಳ ವಾಚ್
ಸುಮಾರು ಹದಿನಾರು ವರ್ಷದ ಕೆಳಗೆ ಒಂದು ವಾಚು ಕಟ್ಟಬೇಕು ಎಂದು ನಿರ್ಧರಿಸಿ, ಜಯನಗರ ನಾಲ್ಕನೇ ಬ್ಲಾಕಿನಲ್ಲಿ ಹೋದವನು ನನಗೊಂದು ನನ್ನ ಪತ್ನಿಗೊಂದು ಎಂದು ಹೆಚ್ ಎಂ ಟಿ ವಾಚ್ ಕೊಂಡೆ.
ನನ್ನ ವಾಚಿಗೆ ಆರುನೂರು ಆದರೆ ಪತ್ನಿಯ ವಾಚಿಗೆ ಆರುನೂರ ಅರವತ್ತು ರುಪಾಯಿ.
ಇಷ್ಟು ವರ್ಷಗಳಿಂದಲೂ ಅದೇ ಕಟ್ಟುತ್ತಿರುವ ನನಗೆ , ಈಗಿನ ಸುದ್ದಿಗಳನ್ನು ನೋಡುವಾಗ ಒಂದು ವಾಚಿಗೆ ಅರವತ್ತು ಎಪ್ಪತ್ತು ಲಕ್ಷ ಅಂದರೆ , ಮೊದಲಿಗೆ ನಂಬಿಕೆಯೆ ಬರಲಿಲ್ಲ,
ಎಂತದೋ ಸುಳ್ಳು ಸುದ್ದಿ, ವಾಚಿಗೆ ಯಾರಾದರು ಅಷ್ಟು ಕೊಡುತ್ತಾರ !?
.
ನೆಟ್ ತೆಗೆದರೆ ನಿಜ,
ಲಕ್ಷಗಳ , ಕೋಟಿಗಳ ವಾಚ್ ಇವೆ .
ನಾವು ಎಂತದೋ ಒಂದು ಸಮಾಜದಲ್ಲಿ ಬದುಕಿತ್ತಿದ್ದೇವೆ.
ಆರುನೂರರ ವಾಚುಕಟ್ಟುವ ಸಾಧಾರಣ ನಾಗರೀಕರು,
ಅರವತ್ತು ಲಕ್ಷ ವಾಚನ್ನು ಕಟ್ಟುವ ನಾಯಕರಾದರು ಹಿಂದುಳಿದವರು ಎಂದು ಹೇಳಿಕೊಳ್ಳುವವರು.
ವಾಸ್ತವಕ್ಕೆ ದೂರದ ಪ್ರಪಂಚ........
Subscribe to:
Post Comments (Atom)
No comments:
Post a Comment
enter your comments please