ನೆನಪಿನ ಪಯಣ - ಭಾಗ 5
ಜ್ಯೋತಿಯ ದ್ವನಿ ಮೊದಲಿನಂತೆ ಇರದೇ ಸ್ವಲ್ಪ ಬದಲಾವಣೆಗೊಂಡಿದೆ,
ಮಾತು
ಮುಂದುವರೆಯಿತು..
..
ಯಾವುದೋ
ಚಿಕ್ಕ ದೇವಾಲಯದಂತಿದೆ,
ನೋಡಿದರೆ
ದೇವಿಯ ವಿಗ್ರಹ ಮಣ್ಣಿನಲ್ಲಿ
ಮಾಡಿರುವುದು.
ಮುಂಬಾಗದಲ್ಲಿ
ಕಳಶವೂ ಇದೆ.
ಪೂಜೆ
ನಡೆಯುತ್ತಿದೆ.
ಊರಜನರೆಲ್ಲ
ಸಂಭ್ರಮದಿಂದ ಓಡಾಡುತ್ತಿದ್ದಾರೆ.
ಇದೇನು
ಈ ವಿಗ್ರಹ ಯಾವುದು,
ಇಲ್ಲಿರುವ
ಕಳಶವಾದರು ಯಾವುದು.
ಊರದೇವಿ
ಮಹಿಷಾಸುರಮರ್ಧಿನಿ ದೇವಿಯ
ಪ್ರತಿಷ್ಠಾಪನೆಯಂತೆ.
ದೇವಿಗೆ
ಆರತಿ ಮೈಸೂರಿನಿಂದ ಬಂದಿದೆಯಂತೆ.
ಏನೆಲ್ಲ
ಮಾತುಗಳು.
ಇನ್ನೂ
ಹಿಂದೆ ಹೋಗಬೇಕೇನೊ ದೇವಾಲಯದ
ರಹಸ್ಯ ತಿಳಿಯಲು.....
ಯಾರೋ
ತಲೆಯ ಮೇಲೆ ಒಂದು ಕುಕ್ಕೆಯನ್ನು
ಹೊತ್ತು ಸಾಗುತ್ತಿದ್ದಾರೆ,
ಹಾ
ಅದು ಬಿದಿರ ಮಂಕರಿಯಂತಿದೆ.
ತಲೆಯ
ಮೇಲಿನ ಕುಕ್ಕೆಯನ್ನು ಹೊತ್ತು
ನಡೆದರು ಚಿಕ್ಕದೊಂದು ಹಳ್ಳಿ.
ಅಲ್ಲಿ
ಅದ್ಯಾವುದೋ ಜನರು ಯಾರು ಗುರುತಿಲ್ಲ.
ಯಾರದೋ
ಮನೆಯ ಮುಂದೆ ಕುಕ್ಕೆ ಇಳಿಸಿ ಏನೋ
ಮಾತು. ಊರಜನ
ಒಂದಿಷ್ಟು ಸೇರಿದ್ದಾರೆ.
ಕುಕ್ಕೆಯಿಂದ
ಒಂದು ಕಳಶವನ್ನು ತೆಗೆದು ತೋರಿಸಿದ
ಆತ. ಆ
ಹಳ್ಳಿಯ ಜನರೆಲ್ಲ ಅವನನ್ನು
ಅಲ್ಲಿಯೇ ನೆಲಸಲು ಕೋರುತ್ತಿದ್ದಾರೆ.
ಅವನಾದರೋ
ವಿಜಯನಗರದಿಂದ ಬಂದವನಂತೆ,
ಅಲ್ಲಿಯ
ಸಾಮ್ರಾಜ್ಯ ಯುದ್ದದಲ್ಲಿ ನಾಶವಾಯಿತು
ಎಂದ. ದೇವಾಲಯದ
ಮೇಲೆ ಯವಳರ ದಾಳಿ ಆಗುತ್ತೆ ಅಂತ
ಭಯ , ಅಲ್ಲಿಯ
ಭ್ರಾಹ್ಮಣರೆಲ್ಲ ಸೇರಿ ದೇವಾಲಯದಲ್ಲಿ
ಇದ್ದ ಎಂಟು ಕಳಶವನ್ನು ಕುಕ್ಕೆಯಲ್ಲಿ
ಹೊತ್ತು ,
ತಲಾ
ಒಂದೊಂದು ದಿಕ್ಕಿಗೆ ಹೊರಟರಂತೆ.
ಇವನ
ಹೆಸರು ಲಿಂಗಯ್ಯ ಎಂದು .
ಊರಹೊರಗಿನ
ಮರದ ಕೆಳಗೆ ಮಲಗಿರುವವಾಗ ದೇವಿ
ಕನಸಿನಲ್ಲಿ ಬಂದು ಇಲ್ಲೇ ನೆಲೆಸುವೆ
ಎಂದು ನುಡಿದಂತಾಯಿತು ಎನ್ನುತ್ತಿದ್ದಾನೆ.
ಎಲ್ಲರಿಗೂ
ಭಯ ಗೌರವ.
ಭಕ್ತಿ
ಶ್ರದ್ದೆಯಿಂದ ಕೇಳುತ್ತಿದ್ದಾರೆ
.
ಜ್ಯೋತಿ
ಇದ್ದಕಿದ್ದಂತೆ ಮೌನವಾದಳು.
ಅವಳ
ಮುಖದಲ್ಲಿ ಎಂತದೋ ಒಂದು ಭಾವ.
ನನಗೆ
ಅರ್ಥವಾಗಲಿಲ್ಲ.
ಆನಂದನನ್ನು
ಕೇಳಿದೆ ಇದೇನು ಎಂದು.
ಅವನು
ನನಗೆ ಸಹ ಅರ್ಥವಾಗುತ್ತಿಲ್ಲ
ಎಂದು ನುಡಿದು ಸುಮ್ಮನಾದ.
ಆಗ
ಸಂದ್ಯಾ ಹೇಳಿದಳು,
ಈ
ಕತೆಯನ್ನು ನಾನು ಒಮ್ಮೆ ಕೇಳಿದ್ದೇನೆ,
ಜ್ಯೋತಿಯ
ತಂದೆ ಹೇಳುತ್ತಿದ್ದರು.
ಹೆಚ್ಚು
ಕಡಿಮೆ ಇದೇ ಕತೆ.
ಇದು
ಅವರ ಊರಿನ ಇತಿಹಾಸಕ್ಕೆ ಸಂಬಂಧಿಸಿದ್ದು,
ಆವರ
ಹಳ್ಳಿಯ ಗ್ರಾಮದೇವತೆಯ ದೇವಾಲಯದ
ಕತೆಯಂತೆ.
ನನಗೀಗ
ಯೋಚನೆಯಾಯಿತು,
ಜ್ಯೋತಿ
ಹೇಳುತ್ತ ಇರುವುದು ಅವಳ ನೆನಪಿನ
ಕತೆಯೋ ಅಥವ ಅವಳ ತಂದೆ ಹೇಳಿದ್ದು
ಕೇಳಿ ಆ ನೆನಪಿನಿಂದ ಹೇಳುತ್ತಿರುವ
ಕತೆಯೋ.
ಅಥವ
ನಿಜಕ್ಕೂ ಜ್ಯೋತಿ ತನ್ನ ಮೆದುಳಿನಲ್ಲಿ
ಅಡಗಿಕುಳಿತಿರುವ ಯಾವುದೋ ನೆನಪನ್ನು
ಉತ್ಖನನ ಮಾಡಿತೆಗೆಯಲು ಸಫಲಳಾಗಿರುವಳೊ
ಗೊತ್ತಿಲ್ಲ.
ಒಂದು
ವೇಳೆ ಇದು ನಿಜವಾಗಿದ್ದಲ್ಲಿ,
ವಿಜ್ನಾನ
ಕ್ಷೇತ್ರದಲ್ಲಿ ಅತಿ ದೊಡ್ಡ
ಅವಿಷ್ಕಾರ ಸಾಧನೆ.
ಅದು
ನನ್ನಿಂದ .
ಯಾವುದೇ
ಪರಿಣಿತಿ ಇಲ್ಲದ ನಾವು ಪ್ರಕೃತಿಗೆ
ಸವಾಲು ಹಾಕಿ ಗೆದ್ದಂತೆ.
ಆದರೆ
ಇದು ನಾವು ಮೊದಲೇ ಕೇಳಿರುವ ಘಟನೆ
ನೋಡೋಣ ಏನಾಗುವುದೋ ಎಂದು
ಕಾಯುತ್ತಿದ್ದೆ.
ಆನಂದನಂತೂ
ಯಾವುದೇ ಪ್ರತಿಕ್ರಿಯೆ ಇಲ್ಲದೇ
ಕುಳಿತಿದ್ದ.
ಆರ್ಯ
ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳುತ್ತಿದ್ದ
ಅನ್ನಿಸುತ್ತಿದೆ.
ಶ್ರೀನಿವಾಸಮೂರ್ತಿಗಳು
ಮಾತ್ರ ಹೆದರಿದಂತೆ ಇದ್ದರು
ಮುಂದೆ
ಜ್ಯೋತಿ ಏನು ಹೇಳುವಳೆಂಬ ಕುತೂಹಲ.
ಜ್ಯೋತಿ
ಶಾಂತಳಾಗಿ ಮಲಗಿದ್ದವಳು ಮತ್ತೆ
ಪ್ರಾರಂಭಿಸಿದಳು.
'
ಇದೇನೊ
ನಾನು ಕೃಷ್ಣದೇವರಾಯ ಎಂದರೆ ಏನೋ
ಎಂದಿದ್ದೆ,
ಆದರೆ
ಸಾಮಾನ್ಯ ವ್ಯಕ್ತಿತ್ವ.
ಅವನ
ಪಕ್ಕದಲ್ಲಿ ನಿಂತಿರುವ ಗಂಡಾಳು
ತನ್ನ ರಾಜನಿಗಿಂತಲೂ ದೊಡ್ಡಯೋದನಂತೆ
ಕಾಣುತ್ತಿರುವನಲ್ಲ.
ಮಹಾರಾಜನ
ದ್ವನಿಯಾದರು ಅಷ್ಟೆ ,
ತೀರ
ಗಮನಸೆಳೆಯುವಂತಿಲ್ಲ.
ಅಲ್ಲದೇ
ಮುಖನೋಡಿದರೆ ಆರೋಗ್ಯವಂತನೆಂದೇನು
ತೋರಲ್ಲ.
ವಯಸ್ಸು
ಎದ್ದು ಕಾಣುತ್ತಿದೆ.
ಮತ್ಯಾರ
ಬಳಿಯೋ ನುಡಿಯುತ್ತಿದ್ದಾನೆ.
ರಾಮಕೃಷ್ಣ,
ನಿನ್ನ
ನುಡಿ ಚಮತ್ಕಾರದಿಂದ ಕೂಡಿರಬಹುದು,
ಕೆಲವೊಮ್ಮೆ
ರಂಜಿಸಬಹುದು.
ಆದರೆ
ಅದರಿಂದ ಸಮಸ್ಯೆಗಳನ್ನು ಪರಿಹರಿಸಲು
ಆಗಲ್ಲ ಅಲ್ಲವೇ ?
ಇದು
ರಾಜಕೀಯ ಸಮಸ್ಯೆ ,
ನೀನು
ಸುಮ್ಮನಿದ್ದುಬಿಡು.
ಸಪ್ಪಗೆ
ನಿಂತಿದ್ದ ವ್ಯಕ್ತಿ ತೆನಾಲಿ
ರಾಮಕೃಷ್ಣನಿರಬಹುದೆ?
. ಇವರ
ಬಟ್ಟೆ ಬರೆ ಧಿರುಸು,
ಮುಖ
ಲಕ್ಷಣ ಇವೆಲ್ಲ ಬೇರೆಯೆ ಇದೆ.
ಮಹಾರಾಜ
ಎಂದು ನಾನು ಭಾವಿಸಿರುವ ಕೃಷ್ಣದೇವರಾಯನ
ಭಾಷೆಯೂ ಸ್ವಲ್ಪ ನನಗೆ ಗಲಿಬಿಲಿಯೆ.
ಅದನ್ನು
ಕನ್ನಡ ಅನ್ನುವದಕ್ಕಿಂತೆ ತೆಲುಗು
ಅನ್ನುವುದು ಸೂಕ್ತವೇನೊ.
ಮಹಾರಾಜ
ಹಾಗು ಅವನ ಪಕ್ಕದಲ್ಲಿದ್ದ
ವ್ಯಕ್ತಿಯೊಬ್ಬರು ,
ಅದೇಕೊ
ಒಳಗೆ ಹೊರಟುಹೋದರು.
ಏನೋ
ಗುಪ್ತವಾಗಿ ಚರ್ಚಿಸಲು ಇರಬಹುದು.
ರಾಮಕೃಷ್ಣನೆಂಬ
ವ್ಯಕ್ತಿಯೂ ಅಲ್ಲಿಂದ ಕದಲಿದ.
........ '
ಜ್ಯೋತಿ
ನಿಲ್ಲಿಸಿದಳು.
ನನಗೆ
ಈಗ ಆಶ್ಚರವೆನಿಸುತ್ತ ಇತ್ತು.
ಅಂದರೆ
ಜ್ಯೋತಿ ತನ್ನ ನೆನಪು ಕೆದುಕುತ್ತ
ಹಿಂದಕ್ಕೆ ಹೋಗುತ್ತಿರುವಳೇನು.
ಆಕೆ
ಇಲ್ಲಿಯವರೆಗೂ ಹೇಳಿದ್ದು
ಕೃಷ್ಣದೇವರಾಯನ ಕಾಲದ ಘಟನೆಯ.
ಅಂದರೆ
ಅದರಲ್ಲಿ ಅವಳ ಪಾತ್ರವೇನು?
ಆಕೆ
ನೋಡುತ್ತ ಇರುವದರಿಂದ ಕೃಷ್ಣದೇವರಾಯನಾಗಲಿ,
ರಾಮಕೃಷ್ಣನಾಗಲಿ
ಆಗುವುದು ಸಾದ್ಯವಿಲ್ಲ.
ನಾನು
ಕುತೂಹಲದಿಂದ ಕೇಳಿದೆ
'ಸರಿ
ಜ್ಯೋತಿ,
ಕೃಷ್ಣದೇವರಾಯ,
ರಾಮಕೃಷ್ಣರ
ಮಾತುಗಳು ನಿನಗೆ ಕೇಳಿಸಿತು.
ಹಾಗಿದ್ದರೆ
ಆಗ ನೀನು ಏನಾಗಿದ್ದೆ.
ನಿನ್ನ
ಪಾತ್ರವೇನು?'
ಜ್ಯೋತಿಯ
ಮುಖದಲ್ಲಿ ಕನಲಿಕೆ,
ನೋವಿನ
ಭಾವ
'ತಿಳಿಯದು’
ಅವಳ
ದ್ವನಿಯಲ್ಲಿ ,
ಅಸ್ವಷ್ಟತೆ
ಕಾಡುತ್ತಿತ್ತು.
'ಸರಿ
ಹಾಗಿದ್ದರೆ,
ಮತ್ತೂ
ಹಿಂದೆ ಹೋಗಲು ಸಾದ್ಯವೆ ?
ಎಷ್ಟು
ಹಿಂದೆ ಹೋಗಲು ನಿನಗೆ ಸಾದ್ಯ ?
'
ಕುತೂಹಲದಿಂದ
ಕೇಳಿದೆ.
'ಹ್ಮ್
......
trying......
' ಎಂದಳು...
ಎಲ್ಲರೂ
ಅವಳ ಮುಖವನ್ನೆ ನೋಡುತ್ತ
ಕುಳಿತಿದ್ದೆವು.
ಇದ್ದಕ್ಕಿದಂತೆ
ಎನ್ನುವಂತೆ ಪ್ರಾರಂಬಿಸಿದಳು,
ಅದೊಂದು
ಹಾಡಿ, ಅಲ್ಲ
ಕಲ್ಲಿನ ಗುಹೆಯಂತೆ ಕಾಣುತ್ತಿದೆ.
ಹೌದು
ಕಲ್ಲಿನ ಗುಹೆ.
ಗೋಡೆಯ
ಮೇಲೆ ಅಸ್ವಷ್ಟವಾಗಿ ಕೆತ್ತನೆಗಳು
ಕಾಣುತ್ತಿವೆ ಕತ್ತಲಿನಲ್ಲಿ.
ಅವಳು
ಮಲಗಿದ್ದಾಳೆ,
ನಿದ್ದೆಯಲ್ಲಿ
ಏಕೊ ಹೊರಳುತ್ತಿದ್ದಾಳೆ,
ನಿದ್ದೆ
ಬಾರದೇನೊ.
ಎದ್ದು
ಕುಳಿತಳು.ಅವಳಿಂದ
ಸ್ವಲ್ಪದೂರದಲ್ಲಿ ಸಣ್ಣಗೆ ಬೆಂಕಿ
ಉರಿಯುತ್ತಿದೆ,
ಬಹುಶಃ
ರಾತ್ರಿಯಲ್ಲಿ ಚಳಿ ತಡೆಯಲು
ಹಾಕಿರುವಂತೆ ತೂರುತ್ತಿದೆ.
ಅವಳ
ಬಟ್ಟೆಯೂ ವಿಚಿತ್ರ.
ನಾರಿನಿಂದಲೋ
ಸೆಣಿಬಿನಿಂದಲೋ ನೈದಿರುವಂತಿದೆ.
ಅವಳಿಂದ
ಸ್ವಲ್ಪ ದೂರದಲ್ಲಿ ಮತ್ತೂ ಒಬ್ಬಳು
ಮಲಗಿದ್ದಾಳೆ ಇವಳಿಗು ಅವಳಿಗೂ
ಸ್ವಲ್ಪ ವ್ಯತ್ಯಾಸವಿದೆ ಆಕಾರದಲ್ಲಿ
ಬಣ್ಣದಲ್ಲಿ ಮುಖಲಕ್ಷಣದಲ್ಲಿ.
ಕುಳಿತವಳು
ಎದ್ದಳು,
ಎದ್ದು
ಎಲ್ಲಿಗೋ ಹೊರ ಹೊರಟಳು.
ಬಾಗಿಲ
ಹೊರಗೆ ಜಗಲಿಯಲ್ಲಿ ಕುಳಿತಿದ್ದ,
ಜನ
ಎಚ್ಚೆತ್ತರು,
ಅವಳನ್ನು
ತಡೆಯುತ್ತಿದ್ದಾರೆ ಎಲ್ಲಿಗೆ
ಎಂದು ಕೇಳುತ್ತಿರುವರು.
ಅವಳು
ಹೊರಗೆ ಕೈ ತೋರಿಸಿ ಹೋಗಬೇಕೆನ್ನುತ್ತಿದ್ದಾಳೆ.
ಹೊರಗೆ
ಮಲಗಿದ್ದ ಅವರೆಲ್ಲ ಒಂದೇ ರೀತಿ
ಬಟ್ಟೆ,
ಮಣಿಯ
ಸರ, ಕೈಲಿ
ಈಟಿಯಂತ ಆಯುಧ ಕಾಣುವಾಗ.
ಈಕೆಯನ್ನು
ಬೇರೆ ಎಲ್ಲಿಂದಲೋ ಕರೆದುತಂದಂತೆ
ಇದೆ. ಆಕೆ
ಓಡಿಹೋಗದಂತೆ ಅಥವ ಅವಳಿಗೆ ಏನು
ಅಪಾಯವಾಗದಂತೆ ಕಾವಲು ಕಾಯುತ್ತಿದ್ದಾರೆ
ಅನ್ನಿಸುತ್ತೆ.
ಅವರೆಲ್ಲ
ಬೇಗಬರುವಂತೆ ಹೇಳಿ ಅವಳನ್ನು
ಕಳುಹಿಸಿದರು.
ಗುಹೆಯಿಂದ
ಹೊರಬಂದಳು ,
ಆಕೆ,
ಸಮಯ
ಅರ್ಧರಾತ್ರಿಯನ್ನು ಮೀರಿತ್ತು.
ಗುಹೆ
ಗುಡ್ಡದ ಮೇಲೆ ಇದೆ ಅನ್ನಿಸುತ್ತೆ,
ಕಾಲು
ದಾರಿ ಹಿಡಿದು ಗುಡ್ಡದಿಂದ
ಕೆಳಗಿಳಿದಳು.
ಜುಳು
ಜುಳು ಎಂದು ಹರಿಯುತ್ತಿರುವ ನದಿ.
ನದಿಯ
ದಡದಲ್ಲಿ ನಿಂತು ನೀರು ಕುಡಿದಳು.
ನಂತರ
ಅಲ್ಲಿರುವ ಬಂಡೆಯನ್ನು ಹತ್ತಿ
ನಿಂತು ಸುತ್ತಲೂ ನೊಡುತ್ತಿದ್ದಳು.
ನಯನ
ಮನೋಹರ ದೃಷ್ಯ.
ಬಂಡೆಯ
ಮುಂದೆ ಆಳವಾದ ಕಮರಿ,
ಅಲ್ಲಿಗೆ
ದುಮುಕುತ್ತಿರುವ ನದಿಯ ನೀರು.
ಭೋರ್ಗರೆಯುತ್ತಿರುವ
ಆ ನೀರಿನ ಶಬ್ದ .
ಕಣಿವೆಯಲ್ಲಿ
ವಿಶಾಲವಾಗಿ ಹರಡಿನಿಂತ ಅರಣ್ಯ.
ಎಲ್ಲವನ್ನು
ಕಣ್ಣಿಗೆ ತುಂಬಿಕೊಳ್ಳಲು ಎನ್ನುವಂತೆ,
ಅಗಸದಲ್ಲಿ
ಬೆಳಗುತ್ತಿರುವ ಪೂರ್ಣಚಂದ್ರ.
ಸ್ವಚ್ಚವಾದ
ಆಕಾಶ.
ತಂಪಾದ
ಗಾಳಿ.
ಎಲ್ಲವೂ
ಆಕೆ ಮೈಮರೆತು ನಿಲ್ಲುವಂತೆ
ಮಾಡಿದ್ದವು ಅನ್ನಿಸುತ್ತೆ.
ಪೂರ್ಣಚಂದ್ರನ
ಬೆಳಕಿನಲ್ಲಿ ಎದುರಿನ ವಿಶಾಲ
ಕಣಿವೆ ದಿಟ್ಟಿಸುತ್ತಿದ್ದಳು.
ಬಹುಶಃ
ಅಲ್ಲಿಂದಲೇ ಆಕೆಯನ್ನು ಕರೆದುತರಲಾಗಿತ್ತೋ
ಏನೊ. ಆಳವಾದ
ಕಣಿವೆಯಲ್ಲಿ ದುಮುಕುತ್ತಿರುವ
ನೀರಿನ ಶಬ್ದ ಎಂತಹದೋ ಒಂದು ವಾತವರಣ
ಸೃಷ್ಟಿಸಿತ್ತು.
ಮನಸ್ಸು
ಯಾವುದೋ ದ್ಯಾನದಲ್ಲಿ ಮುಳುಗುವಂತೆ.
ಹಾಗಿರಲು
ಆಕೆಯ ಹಿಂದೆ ಸಣ್ಣದೊಂದು ಶಬ್ದ
ಕೇಳಿಸಿತು,
ಯಾವುದೋ
ಹೆಜ್ಜೆಯ ಶಭ್ದ.
ಯಾರಿರಬಹುದು
ಎನ್ನುವ ಗಾಭರಿಯೊಂದಿಗೆ
ತಿರುಗಿನೋಡಿದಳು.
ಆದರೆ
ಕಾಲ ಮಿಂಚಿತ್ತು
ಯಾರು
ಎಂದು ತಿಳಿಯುವದರಲ್ಲಿ,
ಹಿಂದಿದ್ದ
ಹೆಣ್ಣು ಅವಳನ್ನು ಬಲವಾಗಿ ತಳ್ಳಿದಳು.
ಆಸರೆ
ತಪ್ಪಿದ ಅವಳು,
ಸುಲುಭವಾಗಿ
ಬಂಡೆಯ ಮೇಲಿನಿಂದ ಕಮರಿಗೆ ಬಿದ್ದಳು,
ಅವಳ
ವಿಕಾರವಾದ ಕೂಗು ಕಣಿವೆಯನ್ನೆಲ್ಲ
ತುಂಬಿತು.
ಒಂದೇ
ಕ್ಷಣ ಆಕೆಯ ದೇಹ ಕಣಿವೆಯ ನೆರಳಿನೊಳಗೆ
ಬಿದ್ದು ಹೋದಂತೆ.
ಮತ್ತೆ
ಅದೇ ನಿಶ್ಯಬ್ದ ನೆಲೆಸಿತು.
ಕಣಿವೆಗೆ
ನದಿಯ ನೀರು ದುಮುಕುವ ಭೋರ್ಗೆರತ
ಹೊರತು ಮತ್ತಾವ ಶಭ್ದವೂಇಲ್ಲ.
ಆಕೆಯನ್ನು
ತಳ್ಳಿ ಕೊಲೆ ಮಾಡಿದ ಹೆಣ್ಣು ,
ಹಾಗೆ
ಗಿಡಗಳ ನಡುವೆ ಮರೆಯಾದಳು.
ಜ್ಯೋತಿ
ಕತೆ ನಿಲ್ಲಿಸಿದಾಗ ನಾನು ಬೆರಗಾಗಿದ್ದೆ.
ಇದೇನು
ಕೊಲೆಯ ವಿಷಯ.
ಯಾವ
ಕಾಲದಲ್ಲಿ ನಡೆಯಿತು ಯಾರಿಗೂ
ತಿಳಿಯದು.
ಇತಿಹಾಸವೋ
ಇಲ್ಲ ಇತಿಹಾಸಕ್ಕಿಂತ ಮೊದಲಿನದೋ
ಯಾವುದೋ ಕಾಡುಜನರ ವ್ಯವಹಾರವೋ
ಯಾರು ಬಲ್ಲರು,
ಈ
ಕತೆಯ ಮೂಲವನ್ನು ಅಷ್ಟಕ್ಕೂ ಇದು
ನಡೆದ ಘಟನೆಯೋ ಇಲ್ಲ ಜ್ಯೋತಿಯ
ಮನದ ಕಲ್ಪನೆಯೋ ತಿಳಿಯದು.
ನಾನು
ಕೇಳಿದೆ
ಸರಿ
ಆದರೆ ಆ ರೀತಿ ತಳ್ಳಿದ ವ್ಯಕ್ತಿ
ಯಾರು?
ಗುರುತಾಗಲಿಲ್ಲವೆ
?
ಇಲ್ಲ
ಹೌದಾ
? ಸರಿ
ಹಾಗೆಂದು ಭಾವಿಸೋಣ.
ಆದರೆ
ಈ ಘಟನೆ ನಿನಗೆ ಹೇಗೆ ನೆನಪಿದೆ.
ಆ
ಎರಡು ವ್ಯಕ್ತಿಗಳಲ್ಲಿ ನೀನು
ಯಾರು .
ತಳ್ಳಿದವಳೊ
ಅಥವ ಕಣಿವೆಗೆ ಬಿದ್ದು ಕೊಲೆಯಾದವಳೊ
ಜ್ಯೋತಿ
ಮೌನವಾಗಿದ್ದಳು.
ನಿಧಾನಕ್ಕೆ
ಅಂದರೆ ಅತಿ ನಿಧಾನಕ್ಕೆ ನುಡಿದಳು
ಆ
ಎರಡು ವ್ಯಕ್ತಿಗಳಲ್ಲಿ ಯಾರು,
ತಳ್ಳಿದವಳೋ
ಕಣಿವೆಗೆ ಬಿದ್ದವಳೊ ಯಾರು ನಾನು
? .........
ತಿಳಿಯದು...
ನಂತರ
ಸುಮಾರು ಒಂದು ಘಂಟೆ ಕಳೆದರು
ಜ್ಯೋತಿ ಮಾತನಾಡುತ್ತಲೇ ಇಲ್ಲ.
ಆಕೆ
ನಿದ್ದೆ ಮಾಡುತ್ತಿದ್ದಾಳೊ
ಎಚ್ಚರದಲ್ಲಿದ್ದಾಳೊ ತಿಳಿಯುತ್ತಿಲ್ಲ.
ಬಲವಂತವಾಗಿಎಬ್ಬಿಸಲು
ನಮಗೆ ಭಯ ಕಾಡುತ್ತಿದೆ
ಮುಂದುವರೆಯುವುದು.....
No comments:
Post a Comment
enter your comments please